‘ಕಾಂಜೀ ಪಿಂಜಿ ಲವ್’ ಹಾಡಿನ ಚಿತ್ರೀಕರಣ

  • IndiaGlitz, [Tuesday,May 06 2014]

‘ಕಾಂಜೀ ಪಿಂಜಿ ಲವ್’ಚಿತ್ರಕ್ಕಾಗಿ ‘ಹೃದಯ ಕಣೆ ಹೃದಯ ಕಣೆ..ಇದು ಪ್ರೀತಿ ಕೊಡುವ ಹೃದಯ ಕಣೆ... ಹಾಡಿನ ಚಿತ್ರೀಕರಣವನ್ನು ನಾಯಕ ವಿಜಯ್ ಹಾಗೂ ದೀಪಿಕ ದಾಸ್ ಅಭಿನಯದಲ್ಲಿ ಜೆ ಪಿ ಉಧ್ಯಾನವನದಲ್ಲಿ ಚಿತ್ರಿಕರಿಸಿಕೊಳ್ಳಲಾಯಿತು. ಅಕುಲ್ ಅವರು ನೃತ್ಯ ನಿರ್ದೇಶನ ಮಾಡಿದರು. ಈ ಹಾಡಿಗೆ ಸಾಹಿತ್ಯವನ್ನು ನಿರ್ದೇಶಕ ಭದ್ರಾವತಿ ರಾಮಕೃಷ್ಣ ಅವರೇ ಒದಗಿಸಿದ್ದಾರೆ.

ಭದ್ರಾವತಿ ರಾಮಕೃಷ್ಣ ಅವರ ಪ್ರಥಮ ನಿರ್ದೇಶನದ ಚಿತ್ರ ‘ಕಾಂಜೀ ಪಿಂಜಿ ಲವ್’.. ಆದ್ರೂ ಸ್ವಲ್ಪ ಸೀರಿಯಸ್, ಭದ್ರಾವತಿ ನಿವಾಸಿಗಳಾದ ಅಕ್ಬರ್, ಕುಮಾರ್ ಹಾಗೂ ಶರಿಫ್ ಅವರ ಪ್ರಥಮ ನಿರ್ಮಾಣದ ಚಿತ್ರ. ಭದ್ರಾವತಿ ರಾಮಕೃಷ್ಣ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಸಹ ರಚಿಸಿದ್ದಾರೆ. ಧ್ರುವ ರಾಜ್ ಅವರ ಸಂಗೀತ ಇದೆ. ಪ್ರಮೋದ್ ಅವರ ಛಾಯಾಗ್ರಹಣ, ಧ್ರುವ ರಾಜ್ ಅವರ ಸಂಗೀತ, ಪವನ್ ಕುಮಾರ್ ಅವರ ಸಂಕಲನ, ಸುಪ್ರೀಂ ಸುಬ್ಬು ಅವರ ಸಾಹಸ, ನೃತ್ಯ ಪಟು ವಿಜಯ್ ಈ ಚಿತ್ರದ ನಾಯಕ, ದೀಪಿಕ ದಾಸ್ ಕಥಾ ನಾಯಕಿ.

ಅಪ್ಪು ವೆಂಕಟೇಶ್, ಸತ್ಯಜಿತ್, ಅವಿ ನಾಷ್, ರಂಗಸ್ವಾಮಿ, ಕಾಶಿ, ಮನದೀಪ್ ರಾಯ್, ಎಂ ಎಸ್ ಉಮೇಶ್ ಸಹ ತಾರಗಣದಲ್ಲಿ ಇದ್ದಾರೆ.